December 22, 2024

ದೀಪೇಂದ್ರ 9 ಎಸೆತದಲ್ಲಿ 50 ರನ್‌; ಟಿ20ಯಲ್ಲಿ 314 ರನ್‌ ದಾಖಲೆ ಬರೆದ ನೇಪಾಳ!

1 min read

ನೇಪಾಳದ ದೀಪೇಂದ್ರ ಸಿಂಗ್‌ 9 ಎಸೆತದಲ್ಲಿ ಅರ್ಧಶತಕ ಬಾರಿಸಿ 16 ವರ್ಷಗಳ ಹಿಂದಿನ ದಾಖಲೆ ಬರೆದರೆ, ನೇಪಾಳ ತಂಡ 20 ಓವರ್‌ ಗಳಲ್ಲಿ 314 ರನ್‌ ದಾಖಲಿಸುವ ಟಿ-20 ಕ್ರಿಕೆಟ್‌ ಇತಿಹಾಸದಲ್ಲೇ ಅತ್ಯಧಿಕ ಮೊತ್ತ ದಾಖಲಿಸಿದ ವಿಶ್ವದಾಖಲೆ ಬರೆದಿದೆ.
ಹಾಂಗ್ಜುನಲ್ಲಿ ಬುಧವಾರ ನಡೆದ ಮಂಗೋಲಿಯಾ ವಿರುದ್ಧದ ಟಿ-20 ಕ್ರಿಕೆಟ್‌ ಪಂದ್ಯದಲ್ಲಿ ನೇಪಾಳ ತಂಡ 273 ರನ್‌ ಗಳ ಭಾರೀ ಜಯದ ದಾಖಲೆ ಬರೆದಿದೆ. ಮಂಗೋಲಿಯಾ ತಂಡ 13.1 ಓವರ್‌ ಗಳಲ್ಲಿ 41 ರನ್‌ ಗೆ ಆಲೌಟಾಗಿದೆ.
ನೇಪಾಳದ ದೀಪೇಂದ್ರ ಸಿಂಗ್ ಐರಿ 9 ಅರ್ಧಶತಕ ಪೂರೈಸಿದ 2007 ರ ಟಿ 20 ವಿಶ್ವಕಪ್‌ ನಲ್ಲಿ ಇಂಗ್ಲೆಂಡ್ ವಿರುದ್ಧ ಯುವರಾಜ್ ಸಿಂಗ್ 12 ಎಸೆತಗಳಲ್ಲಿ ದಾಖಲಿಸಿದ್ದ ಅತೀ ವೇಗದ ಅರ್ಧಶತಕದ ದಾಖಲೆಯನ್ನು ಮುರಿದರು.
ಕೇವಲ 34 ಎಸೆತಗಳಲ್ಲಿ ಅಜೇಯ ಶತಕ ಬಾರಿಸಿದ ಕುಶಾಲ್ ಮಲ್ಲಾ, ಟಿ 20 ಕ್ರಿಕೆಟ್‌ ನಲ್ಲಿ ಶತಕ ಗಳಿಸಿದ ನೇಪಾಳದ ಮೊದಲ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ನೇಪಾಳ 3 ವಿಕೆಟ್ ನಷ್ಟಕ್ಕೆ 314 ರನ್ ಗಳಿಸಿದ್ದು, ಟಿ-20 ಕ್ರಿಕೆಟ್‌ ನಲ್ಲಿ ಅತೀ ಹೆಚ್ಚು ರನ್‌ ದಾಖಲೆ ಬರೆಯಿತು. 2019ರಲ್ಲಿ ಐರ್ಲೆಂಡ್‌ ವಿರುದ್ಧ ಆಫ್ಘಾನಿಸ್ತಾನ 3 ವಿಕೆಟ್‌ ಗೆ 278 ರನ್‌ ಗಳಿಸಿದ ಸಾರ್ವಕಾಲಿಕ ದಾಖಲೆ ಮುರಿಯಿತು.
ನೇಪಾಳ ತಂಡ ಪಂದ್ಯದಲ್ಲಿ ಒಟ್ಟಾರೆ 26 ಸಿಕ್ಸರ್‌ ಸಿಡಿಸುವ ಮೂಲಕ ಅತೀ ಹೆಚ್ಚು ಸಿಕ್ಸರ್‌ ಬಾರಿಸಿದ ತಂಡ ಎಂಬ ಮತ್ತೊಂದು ದಾಖಲೆ ಬರೆಯಿತು. ಆಫ್ಘಾನಿಸ್ತಾನ ತಂಡ 2019ರಲ್ಲಿ ಐರ್ಲೆಂಡ್‌ ವಿರುದ್ಧದ ಪಂದ್ಯದಲ್ಲಿ 22 ಸಿಕ್ಸರ್‌ ಬಾರಿಸಿತ್ತು.
ಮಂಗೋಲಿಯಾ ಮೊದಲು ಬ್ಯಾಟ್ ಮಾಡಿದ ನಂತರ, ನೇಪಾಳವು ತುಲನಾತ್ಮಕವಾಗಿ ನಿಧಾನಗತಿಯ ಆರಂಭವನ್ನು ಹೊಂದಿತ್ತು. ಮಲ್ಲಾ (50 ಎಸೆತಗಳಲ್ಲಿ ಅಜೇಯ 137, 8×4, 12×6) ಮತ್ತು ನಾಯಕ ರೋಹಿತ್ ಪೌಡೆಲ್ (27 ಎಸೆತಗಳಲ್ಲಿ 61; 2×4, 6×6) ಮೂರನೇ ವಿಕೆಟ್ ಗೆ ಕೇವಲ 65 ಎಸೆತಗಳಲ್ಲಿ 193 ರನ್ ಗಳಿಸಿದರು.
ಪೌಡೆಲ್ 19 ನೇ ಓವರ್ ನ ಮೊದಲ ಎಸೆತದಲ್ಲಿ ಔಟಾದರು. ಪಂದ್ಯ ಮುಗಿಯಲು 11 ಎಸೆತಗಳು ಬಾಕಿ ಇರುವಾಗ ಕ್ರೀಸ್ ಗೆ ಬಂದ ದೀಪೇಂದ್ರ 10 ಎಸೆತಗಳನ್ನು ಆಡುವ ಮೂಲಕ ಇತಿಹಾಸ ನಿರ್ಮಿಸಿದರು.
ಮಂಗೋಲಿಯಾ ಪರ ಲುವ್ಸಾನ್ಜುಂಡುಯಿ ಎರ್ಡೆನೆಬುಲ್ಗನ್ (47ಕ್ಕೆ 1), ದವಾಸುರೆನ್ ಜಮ್ಯಾನ್ಸುರೆನ್ (60ಕ್ಕೆ 1), ಮುಂಗುನ್ ಅಲ್ಟಾಂಖುಯಾಗ್ (55ಕ್ಕೆ 1) ತಲಾ ಒಂದು ವಿಕೆಟ್ ಪಡೆದರು.

Leave a Reply

Your email address will not be published. Required fields are marked *