ಡುಂಕಿ-ಸಲಾರ್ ಡಿ.22ಕ್ಕೆ ರಿಲೀಸ್: ಕ್ರಿಸ್ ಮಸ್ ಗೆ ಶಾರೂಖ್- ಪ್ರಭಾಸ್ ಫೈಟ್!
ಸ್ಟಾರ್ ನಟ ಶಾರೂಖ್ ಖಾನ್ ಮತ್ತು ಪ್ರಭಾಸ್ ನಟನೆಯ ಬಹು ನಿರೀಕ್ಷಿತ ಡುಂಕಿ ಮತ್ತು ಸಾಲರ್ ಚಿತ್ರಗಳು ಕ್ರಿಸ್ ಮಸ್ ಗೆ ಒಂದೇ ದಿನ ಬಿಡುಗಡೆ ಆಗಲಿವೆ.
ಶಾರೂಖ್ ಅಭಿಯನದ ಡುಂಕಿ ಮತ್ತು ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಪ್ರಭಾಸ್ ನಟಿಸಿರುವ ಸಲಾರ್ ಚಿತ್ರಗಳು ಕ್ರಿಸ್ ಮಸ್ ಪ್ರಯುಕ್ತ ಡಿಸೆಂಬರ್ 22ರಂದು ಬಿಡುಗಡೆ ಆಗಲಿವೆ. ಇದರಿಂದ ಎರಡು ಭಾರೀ ಬಜೆಟ್ ಚಿತ್ರಗಳು ಒಂದೇ ದಿನ ಬಿಡುಗಡೆ ಆಗಲಿವೆ.
ಪಠಾಣ್ ಮತ್ತು ಜವಾನ್ ಚಿತ್ರಗಳ ಭರ್ಜರಿ ಯಶಸ್ಸಿನಿಂದ ಬೀಗುತ್ತಿರುವ ಶಾರೂಖ್ ಖಾನ್ ಮತ್ತು ರಾಜ್ ಕುಮಾರ್ ಇರಾನಿ ನಿರ್ದೇಶನದಲ್ಲಿ ನಟಿಸುತ್ತಿರುವ ಮೊದಲ ಚಿತ್ರವಾಗಿದ್ದು, ಭಾರೀ ಕುತೂಹಲ ಮೂಡಿಸಿದೆ. ಡುಂಕಿ ಚಿತ್ರ ಸೆಪ್ಟೆಂಬರ್ 28ರಂದು ಬಿಡುಗಡೆ ಆಗಬೇಕಿತ್ತು. ಅದರೆ ತಾಂತ್ರಿಕ ಕಾರಣಗಳಿಂದ ಮುಂದೂಡಲಾಗಿದ್ದು, ಡಿಸೆಂಬರ್ 22ರಂದು ಬಿಡುಗಡೆ ಮಾಡಲು ಚಿತ್ರ ತಂಡ ನಿರ್ಧರಿಸಿದೆ.
ಬಾಹುಬಲಿ ಚಿತ್ರಗಳ ನಂತರ ಸೋಲು ಕಂಡಿರುವ ಪ್ರಭಾಸ್ ಗೆ ಕೆಜಿಎಫ್ ಭರ್ಜರಿ ಹಿಟ್ ಚಿತ್ರ ನೀಡಿದ ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಸಲಾರ್ ಚಿತ್ರ ಭಾರೀ ಕುತೂಹಲ ಮೂಡಿಸಿದೆ. ಎರಡೂ ಚಿತ್ರಗಳು ಒಂದೇ ದಿನ ಬಿಡುಗಡೆ ಆಗುವ ಮೂಲಕ ಕುತೂಹಲ ಮೂಡಿಸಿದೆ.
2018ರ ನಂತರ ಮತ್ತೆ ಶಾರೂಖ್ ಖಾನ್ ಮತ್ತು ಪ್ರಶಾಂತ್ ನೀಲ್ ಚಿತ್ರಗಳು ಒಂದೇ ದಿನ ಬಿಡುಗಡೆ ಆಗಲಿವೆ. ಜೀರೊ ಮತ್ತು ಕೆಜಿಎಫ್ ಚಿತ್ರಗಳ ಪೈಪೋಟಿಯಲ್ಲಿ ಪ್ರಶಾಂತ್ ನೀಲ್ ಚಿತ್ರ ಭರ್ಜರಿ ಯಶಸ್ಸು ಕಂಡರೆ ಜಿರೋ ಅತ್ಯಂತ ಕಳಪೆ ಚಿತ್ರಗಳ ಪಟ್ಟಿಗೆ ಸೇರಿತ್ತು.