December 22, 2024

ಬೆಂಗಳೂರು ಬಂದ್‌ ಗೆ ಮಿಶ್ರ ಪ್ರತಿಕ್ರಿಯೆ: ಕುರುಬೂರು ಬಂಧನ


ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸುವುದನ್ನು ವಿರೋಧಿಸಿ ರೈತ ಸಂಘಟನೆಗಳು ಕರೆ ನೀಡಿದ್ದ ಬೆಂಗಳೂರು ಬಂದ್‌ ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಮಂಗಳವಾರ ಕರೆ ನೀಡಲಾಗಿದ್ದ ಬೆಂಗಳೂರು ಬಂದ್‌ ಗೆ ಮುನ್ನವೇ ರೈತ ಮುಖಂಡ ಕುರುಬೂರು ಶಾಂತಕುಮಾರ್‌ ಸೇರಿದಂತೆ ಹಲವು ಮುಖಂಡರನ್ನು ಪೊಲೀಸರು ಬಂಧಿಸಿದ್ದರು. ಇದರಿಂದ ಬೆಳಿಗ್ಗೆ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು
ಬೆಳಿಗ್ಗೆ 9 ಗಂಟೆಯಿಂದಲೇ ಸಾರಿಗೆ ಬಸ್‌ ಗಳು ಸಂಚಾರ ಆರಂಭಿಸಿದ್ದವು. ಆಟೋಗಳು ರೋಡಿಗೆ ಇಳಿಯದೇ ಇದ್ದರೂ ಓಲಾ ಮತ್ತು ಉಬೆರ್‌ ಕ್ಯಾಬ್‌ ಗಳು ರಸ್ತೆಗೆ ಇಳಿದಿದ್ದರಿಂದ ಜನರ ಸಂಚಾರಕ್ಕೆ ಅಡ್ಡಿಯಾಗಿದ್ದರೂ ಯಾವುದೇ ಸಮಸ್ಯೆ ಕಂಡು ಬರಲಿಲ್ಲ
ಕನ್ನಡಪರ ಸಂಘಟನೆಗಳು ತೆರೆದಿದ್ದ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸುವುದು ಅಲ್ಲಲ್ಲಿ ಕಂಡು ಬಂದಿತು. ಹೋಟೆಲ್‌, ಮೆಡಿಕಲ್‌ ಸ್ಟೋರ್‌ ಗಳು ಸಣ್ಣಪುಟ್ಟ ಅಂಗಡಿಗಳು ತೆರೆದಿದ್ದವು.

Leave a Reply

Your email address will not be published. Required fields are marked *