ಸನಾತನ ಧರ್ಮದ ವಿವಾದ: ದಯಾನಿಧಿ ಸ್ಟಾಲಿನ್ ಸೇರಿ 14 ಮಂದಿಗೆ ಸುಪ್ರೀಂ ನೋಟಿಸ್
ಸನಾತನ ಧರ್ಮದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಕ್ಕಾಗಿ ತಮಿಳುನಾಡು ಡಿಎಂಕೆ ಸಚಿವ ದಯಾನಿಧಿ ಸ್ಟಾಲಿನ್ ಸೇರಿದಂತೆ 14 ಮಂದಿಗೆ ಸುಪ್ರೀಂಕೋರ್ಟ್ ನೋಟಿಸ್ ಜಾರಿ ಮಾಡಿದೆ.
ಸನಾತನ ಧರ್ಮದ ವಿರುದ್ಧ ಹೇಳಿಕೆ ನೀಡಿದ ದಯಾನಿಧಿ ಮಾರನ್, ಎ. ರಾಜಾ ಸೇರಿದಂತೆ 14 ಮಂದಿಯ ವಿರುದ್ಧ ಸಿಬಿಐ ಅಥವಾ ತಮಿಳುನಾಡು ಪೊಲೀಸರಿಗೆ ಯಾಕೆ ಎಫ್ ಐಆರ್ ದಾಖಲಿಸಬಾರದು ಎಂದು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ನೋಟಿಸ್ ಜಾರಿ ಮಾಡಿದೆ.
ಸುಪ್ರೀಂಕೋರ್ಟ್ ಈ ಪ್ರಕರಣವನ್ನು ದ್ವೇಷದ ರಾಜಕಾರಣ ಎಂದು ಪರಿಗಣಿಸಲು ನಿರಾಕರಿಸಿದ್ದು, ತಮಿಳುನಾಡು ಸರ್ಕಾರ ಸೇರಿದಂತೆ 14 ಮಂದಿಗೆ ನೋಟಿಸ್ ಜಾರಿ ಮಾಡಿದ್ದು, ವಿವಾದದ ಕುರಿತು ಉತ್ತರಿಸುವಂತೆ ಸೂಚಿಸಿದೆ.