ಹೊಸ ಸಂಸತ್ ಭವನ ಪ್ರವೇಶಿಸುವ ಮುನ್ನ ಸಂಸದರ ಸಾಮೂಹಿಕ ಫೋಟೊ!
ನೂತನ ಸಂಸತ್ ಭವನಕ್ಕೆ ಸ್ಥಳಾಂತರಗೊಳ್ಳುವ ಮುನ್ನ ಪ್ರಧಾನಿ ಮೋದಿ ಸೇರಿದಂತೆ ಎಲ್ಲಾ ಸಂಸತ್ ಸದಸ್ಯರ ಸಾಮೂಹಿಕ ಫೋಟೊ ತೆಗೆಯಲಾಯಿತು.
ಲೋಕಸಭಾ ವಿಶೇಷ ಅಧಿವೇಶನದ ಎರಡನೇ ದಿನವಾದ ಮಂಗಳವಾರ ಸಂಸತ್ ಅಧಿವೇಶನ ಹಳೆಯ ಕಟ್ಟಡದಿಂದ ನೂತನ ಕಟ್ಟಡಕ್ಕೆ ಸ್ಥಳಾಂತರಗೊಂಡಿತು.
ಮೊದಲ ದಿನ ಹಳೆಯ ಸಂಸತ್ ಭವನದಲ್ಲಿ ಅಧಿವೇಶನ ನಡೆದಿದ್ದು, ಎರಡನೇ ದಿನವಾದ ಮಂಗಳವಾರದಿಂದ ನೂತನ ಸಂಸತ್ ಭವನದಲ್ಲಿ ಅಧಿವೇಶನ ನಡೆಯಲಿದೆ.
ಸಾಮೂಹಿಕ ಫೋಟೊ ಸೆಷನ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ, ಸ್ಫೀಕರ್ ಓಂಪ್ರಕಾಶ್ ಬಿರ್ಲಾ, ಕೇಂದ್ರ ಸಚಿವ ರಾಜನಾಥ್ ಸಿಂಗ್, ರಾಹುಲ್ ಗಾಂಧಿ ಸೇರಿದಂತೆ ಹಲವು ಪ್ರಮುಖ ಸಂಸದರು ಪಾಲ್ಗೊಂಡಿದ್ದರು.