ಜಮ್ಮು ಕಾಶ್ಮೀರದಲ್ಲಿ 48 ಗಂಟೆಯಿಂದ ಉಗ್ರರ ವಿರುದ್ಧ ಕಾರ್ಯಾಚರಣೆ
ಜಮ್ಮು ಕಾಶ್ಮೀರದ ಅನಂತ್ ನಾಗ್ ಜಿಲ್ಲೆಯ ಕೊಕೆರಾಂಗ್ ಕಾಡಿನಲ್ಲಿ ಉಗ್ರರ ವಿರುದ್ಧದ ಕಾರ್ಯಾಚರಣೆ 48 ಗಂಟೆ ನಂತರವೂ ಮುಂದುವರಿದಿದ್ದು, ಗಾಯಗೊಂಡಿದ್ದ ಸೇನಾಧಿಕಾರಿ ಮೃತಪಟ್ಟಿದ್ದು, ಒಬ್ಬ ಯೋಧ ನಾಪತ್ತೆಯಾಗಿದ್ದಾರೆ.
ಉಗ್ರರ ವಿರುದ್ಧದ ಕಾರ್ಯಾಚರಣೆ ಮೂರನೇ ದಿನಕ್ಕೆ ಕಾಲಿಟ್ಟಿದ್ದು, ಗಾಯಗೊಂಡಿದ್ದ ಅಧಿಕಾರಿಯೊಬ್ಬರು ಶುಕ್ರವಾರ ಮೃತಪಟ್ಟಿದ್ದಾರೆ. ಇದರಿಂದ ಮೂವರು ಸೇನಾಧಿಕಾರಿಗಳು ಮೃತಪಟ್ಟಂತೆ ಆಗಿದೆ.
ಕಾರ್ಯಾಚರಣೆ ವೇಳೆ ಒಬ್ಬ ಯೋಧ ನಾಪತ್ತೆಯಾಗಿದ್ದು, ಇಬ್ಬರು ಗಾಯಗೊಂಡಿದ್ದಾರೆ. ಇದರಿಂದ ಕಾರ್ಯಾಚರಣೆ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆಯುತ್ತಿದೆ.
ಉಗ್ರರ ಕಾರ್ಯಾಚರಣೆಗೆ ಭಾರತೀಯ ಸೇನೆ ದಾಳಿ ಮಾಡುವ ಸಾಮರ್ಥ್ಯದ ಡ್ರೋಣ್, ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಬಳಸುತ್ತಿದೆ. ಕಾರ್ಯಾಚರಣೆಗೆ ಭಾರತೀಯ ಸೇನೆ ಅಲ್ಲದೇ ಜಮ್ಮು ಕಾಶ್ಮೀರದ ಪೊಲೀಸರು ಕೈ ಜೋಡಿಸಿದ್ದಾರೆ.