ವಿಶೇಷ ಲೋಕಸಭಾ ಅಧಿವೇಶನ: ಬಿಜೆಪಿ ಸಂಸದರಿಗೆ ವಿಪ್ ಜಾರಿ
5 ದಿನಗಳ ಕಾಲ ನಡೆಯಲಿರುವ ವಿಶೇಷ ಲೋಕಸಭಾ ಅಧಿವೇಶನದಲ್ಲಿ ಕಡ್ಡಾಯವಾಗಿ ಎಲ್ಲಾ ಸಂಸದರು ಪಾಲ್ಗೊಳ್ಳುವಂತೆ ಬಿಜೆಪಿ ವಿಪ್ ಜಾರಿಗೊಳಿಸಿದೆ.
ಸೆಪ್ಟೆಂಬರ್ 18ರಿಂದ 22ರವರೆಗೆ ನಡೆಯಲಿರುವ ವಿಶೇಷ ಅಧಿವೇಶನದಲ್ಲಿ ಪ್ರಮುಖ ವಿಷಯಗಳ ಕುರಿತು ಚರ್ಚೆ ನಡೆಯಲಿದ್ದು, ಒಂದು ದೇಶ, ಒಂದು ಚುನಾವಣೆ ಮಸೂದೆ ಮಂಡನೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಬಿಜೆಪಿ ಸಂಸದರು ಲೋಕಸಭಾ ಅಧಿವೇಶನದಲ್ಲಿ ಪಾಲ್ಗೊಂಡು ಕೇಂದ್ರ ಸರಕಾರದ ನಿಲುವನ್ನು ಬೆಂಬಲಿಸುವಂತೆ ಸೂಚನೆ ನೀಡಿದೆ.
ಸೆಪ್ಟೆಂಬರ್ 18ರಿಂದ ನಡೆಯಲಿರುವ ಅಧಿವೇಶನದ ವೇಳೆ ಸಂವಿಧಾನ ಸಭಾದಲ್ಲಿ ಸಂವಿಧಾನ ಸಾಗಿಬಂದ 75 ವರ್ಷದ ಪ್ರಯುಕ್ತ ವಿಶೇಷ ಚರ್ಚೆ ನಡೆಯಲಿದೆ ಎಂದು ಹೇಳಲಾಗಿದೆ. ಆದರೆ ಕೇಂದ್ರ ಸರಕಾರ ಚರ್ಚೆಯ ಕುರಿತು ನಿರ್ದಿಷ್ಟ ಉದ್ದೇಶ ತಿಳಿಸದೇ ಮರೆ ಮಾಚುತ್ತಿದೆ ಎಂದು ಪ್ರತಿಪಕ್ಷಗಳು ಆರೋಪಿಸಿವೆ.