December 23, 2024

ಲಿಬಿಯಾದಲ್ಲಿ ಪ್ರಳಯಾಂತಕ ಪ್ರವಾಹ: 5300 ಶವಗಳ ಪತ್ತೆ


ಲಿಬಿಯಾದಲ್ಲಿ ಭಾರೀ ಮಳೆಯಿಂದ ಜಲಾಶಯ ಒಡೆದು ದಿಢೀರ್‌ ಅಪ್ಪಳಿಸಿದ ಪ್ರವಾಹದಿಂದ 5300 ಶವಗಳು ಪತ್ತೆಯಾಗಿದ್ದು, ಇನ್ನೂ 10 ಸಾವಿರ ಮಂದಿ ನಾಪತ್ತೆಯಾಗಿದ್ದಾರೆ.
ಡೆರ್ನಾ ಪ್ರದೇಶದಲ್ಲಿ ಭಾನುವಾರ ಸಂಭವಿಸಿದ ಪ್ರವಾಹದಿಂದ ಕರಾವಳಿ ಪ್ರದೇಶವೊಂದರಲ್ಲೇ ಭದ್ರತಾ ಸಿಬ್ಬಂದಿ 1 ಸಾವಿರಕ್ಕೂ ಅಧಿಕ ಶವಗಳನ್ನು ಹೊರತೆಗೆದಿದ್ದಾರೆ.
ಪ್ರವಾಹದಿಂದ ಇಡೀ ನಗರ ಸಂಪೂರ್ಣ ಹಾನಿಯಾಗಿದ್ದು, ಕಾರುಗಳು, ಮರಗಳು ಉರುಳಿ ಎಲ್ಲೆಂದರಲ್ಲಿ ಸಿಲುಕಿಕೊಂಡಿದೆ.
ಲಿಬಿಯಾ ಸರಕಾರ ಆರಂಭದಲ್ಲಿ 150 ರಿಂದ 200 ಮಂದಿ ಮೃತಪಟ್ಟಿದ್ದಾರೆ ಎಂದು ಹೇಳಿತ್ತು. ಆದರೆ ರೆಡ್‌ ಕ್ರಾಸ್‌ ಸಂಸ್ಥೆ 10 ಸಾವಿರ ಮಂದಿ ನಾಪತ್ತೆಯಾಗಿದ್ದಾರೆ ಎಂದು ಹೇಳಿತ್ತು.

Leave a Reply

Your email address will not be published. Required fields are marked *