ತ್ರಿಪುರದಲ್ಲಿ ಬಿಜೆಪಿಗೆ ಜಯ: ಇಂಡಿಯಾ ಮೈತ್ರಿಕೂಟಕ್ಕೆ ತಲಾ 1 ಗೆಲುವು
6 ರಾಜ್ಯಗಳ 7 ವಿಧಾನಸಭಾ ಸ್ಥಾನಗಳಿಗೆ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ತ್ರಿಪುರದಲ್ಲಿ ಎರಡು ಸ್ಥಾನ ಗೆಲ್ಲುವ ಮೂಲಕ ಮೇಲುಗೈ ಸಾಧಿಸಿದರೆ ಇಂಡಿಯಾ ಮೈತ್ರಿಕೂಟ ತಲಾ ಒಂದು ಸ್ಥಾನ ಗೆಲ್ಲುವ ಮೂಲಕ ಮೇಲುಗೈ ಸಾಧಿಸಿದೆ.
ತ್ರಿಪುರದಲ್ಲಿ 2 ಹಾಗೂ ಉತ್ತರಾಖಂಡ್ ನ 1 ಸ್ಥಾನದಲ್ಲಿ ಗೆಲುವು ಸಾಧಿಸಿದ್ದು, ಈ ಮೂಲಕ ಮೂರು ಸ್ಥಾನಗಳಲ್ಲಿ ಬಿಜೆಪಿ ಗೆಲುವು ದಾಖಲಿಸುವ ಸಾಧ್ಯತೆ ಇದೆ.
ಇಂಡಿಯಾ ಮೈತ್ರಿಕೂಟದ ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್ ಮತ್ತು ಜಾರ್ಖಂಡ್ ಪಕ್ಷಗಳು, ಕೇರಳ, ಪಶ್ಚಿಮ ಬಂಗಾಳ ಮತ್ತು ಜಾರ್ಖಂಡ್ ನಲ್ಲಿ ತಲಾ ಒಂದು ಸ್ಥಾನ ಗೆದ್ದುಕೊಂಡಿವೆ. ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷ ಒಂದು ಸ್ಥಾನದಲ್ಲಿ ಮುನ್ನಡೆ ಸಾಧಿಸುವ ಮೂಲಕ ಬಿಜೆಪಿಗೆ ಆಘಾತ ನೀಡುವ ಸುಳಿವು ನೀಡಿದೆ.
ವಿಶೇಷ ಅಂದರೆ ಇಂಡಿಯಾ ಮೈತ್ರಿಕೂಟದ ಪಕ್ಷಗಳ ಅಭ್ಯರ್ಥಿಗಳು ತಮ್ಮದೇ ಮೈತ್ರಿಕೂಟದ ಪಕ್ಷದ ಅಭ್ಯರ್ಥಿಗಳ ವಿರುದ್ಧವೇ ಗೆಲುವು ಸಾಧಿಸಿದೆ.
ಕೇರಳದ ಪುದುಪಲ್ಲೈ ಚಾಂಡಿ ಓಮೆನ್, ಜಾರ್ಖಂಡ್ ನ ಡುಮ್ರಿಯಲ್ಲಿ ಎಜೆಎಸ್ ಯು ಅಭ್ಯರ್ಥಿ ಯಶೋಧಾ ದೇವಿ, ಉತ್ತರ ಪ್ರದೇಶದ ಘೋಸಿಯಲ್ಲಿ ಸಮಾಜವಾದಿ ಪಕ್ಷದ ಸುಧಾಕರ್ ಸಿಂಗ್, ಪಶ್ಚಿ,ಮ ಬಂಗಾಳದ ದುಪುಗುರಿಯಲ್ಲಿ ನಿರ್ಮಲಾ ಚಂದ್ರ ರಾಯ್ ಗೆಲುವು ಪಡೆದಿದ್ದಾರೆ.
ತ್ರಿಪುರದ ಬೊಕ್ಸಾನಗರ್ ಕ್ಷೇತ್ರದಲ್ಲಿ ಬಿಜೆಪಿಯ ಟಫಾಜ್ಜಲ್ ಹುಸೇನ್, ಧನುಪುರ್ ಕ್ಷೇತ್ರದಲ್ಲಿ ಬಿಜೆಪಿಯ ಬಿಂದು ದೇವನಾಥ್, ಉತ್ತರಾಖಂಡ್ ನ ಭಾಗೇಶ್ವರ್ ನಲ್ಲಿ ಪಾರ್ವತಿ ದಾಸ್ ಗೆಲುವು ಸಾಧಿಸಿದ್ದಾರೆ.