February 4, 2026

ಸೂರ್ಯನತ್ತ ಯಶಸ್ವಿಯಾಗಿ ಚಿಮ್ಮಿದ ಆದಿತ್ಯ: ಇತಿಹಾಸ ಬರೆದ ಇಸ್ರೊ

1 min read

ಚಂದ್ರಯಾನ-3 ಯಶಸ್ಸಿನ ಬೆನ್ನಲ್ಲೇ ಭಾರತೀಯ ಬಾಹ್ಯಕಾಶ ಸಂಸ್ಥೆ ಸೂರ್ಯನ ಅಧ್ಯಯನಕ್ಕಾಗಿ ಆದಿತ್ಯ ಎಲ್‌ 1 ಉಪಗ್ರಹ ಯಶಸ್ವಿಯಾಗಿ ಉಡಾವಣೆಗೊಂಡಿದೆ. ಈ ಮೂಲಕ ಇಸ್ರೊ ಬಾಹ್ಯಕಾಶದಲ್ಲಿ ಇತಿಹಾಸ ನಿರ್ಮಿಸಿದೆ.
ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿ ಶನಿವಾರ ಬೆಳಿಗ್ಗೆ 11.50ಕ್ಕೆ ಸರಿಯಾಗಿ ಪಿಎಸ್‌ ಎಲ್‌ ವಿ ಇಂಧನದ ಸಹಾಯದಿಂದ ಆದಿತ್ಯ ಎಲ್‌ 1 ಯಶಸ್ವಿಯಾಗಿ ಉಡಾವಣೆಗೊಂಡಿದ್ದು, ಸೂರ್ಯನತ್ತ ಚಿಮ್ಮಿದೆ.
ಸೌರ ಶಕ್ತಿ ಬಳಸಿಕೊಂಡು ಸೂರ್ಯನ ಸುತ್ತ ಸಂಚರಿಸಲಿರುವ ಆದಿತ್ಯ ಎಲ್‌ 1 ಪ್ರತಿದಿನ 1440 ಫೋಟೊಗಳನ್ನು ರವಾನಿಸಲಿದೆ. 190 ವಿಇಎಲ್‌ ಸಿ ಪೇ ಲೋಡ್ 5 ವರ್ಷಗಳ ಕಾಲ ಸೂರ್ಯನ ಪ್ರದಕ್ಷಿಣೆ ಹಾಕಲಿದ್ದು, ಪ್ರತಿದಿನ ಫೊಟೊಗಳನ್ನು ರವಾನಿಸಲಿದೆ.
ಆದಿತ್ಯ ಎಲ್‌ 1 ಕ್ಷಿಪಣಿ ಹಾಲೋ ಆರ್ಬಿಟ್‌ ಗೆ ಸೇರಲಿದ್ದು, 1.5 ಲಕ್ಷ ಕಿ.ಮೀ. ದೂರದ ಕಕ್ಷೆಗೆ ಸೇರಲು 125 ದಿನಗಳ ಪ್ರಯಾಣ ನಡೆಸಲಿದೆ

Leave a Reply

Your email address will not be published. Required fields are marked *