ಚಂದ್ರಯಾನ-4 ಯೋಜನೆಗೆ ಜಪಾನ್ ಜೊತೆ ಕೈ ಜೋಡಿಸಲಿರುವ ಇಸ್ರೊ
1 min readಚಂದ್ರಯಾನ-3 ಯಶಸ್ಸಿನ ಬೆನ್ನಲ್ಲೇ ಭಾರತೀಯ ಬಾಹ್ಯಕಾಶ ಸಂಸ್ಥೆ ಇಸ್ರೋ ಇದೀಗ ಚಂದ್ರಯಾನ-4ಗಾಗಿ ಜಪಾನ್ ಜೊತೆ ಕೈ ಜೋಡಿಸಲಿದೆ.
ವಿಕ್ರಮ್ ಲ್ಯಾಡರ್ ಯಶಸ್ವಿಯಾಗಿ ಚಂದ್ರನ ದಕ್ಷಿಣ ಧ್ರುವದ ಮೇಲೆ ಬುಧವಾರ ಇಳಿಯುವ ಮೂಲಕ ಚಂದ್ರಯಾನ-3 ಐತಿಹಾಸಿಕ ಸಾಧನೆ ಮಾಡಿತು. ಇದೀಗ ಪ್ರಗ್ಯಾನ್ ರೋವರ್ 14 ದಿನಗಳ ಕಾಲ ಸಂಚರಿಸಿ ಚಂದ್ರನ ಮೇಲ್ಮೈ ಬಗ್ಗೆ ವರದಿ ನೀಡಲಿದೆ.ಚಂದ್ರಯಾನ-3 ಯಶಸ್ಸಿನ ಬೆನ್ನಲ್ಲೇ ಇಸ್ರೊ ಚಂದ್ರಯಾನ-4 ಮೇಲೆ ಕಣ್ಣಿಟ್ಟಿದೆ. ಜಪಾನ್ ಏರೋಸ್ಪೇಸ್ ಎಕ್ಸ್ ಪ್ಲೊರೇಷನ್ ಏಜೆನ್ಸಿ (ಜಾವಾ) ಲೂನಾರ್ ಪೊಲಾರ್ ಎಕ್ಸ್ ಪ್ಲೊರೇಷನ್ ಮಿಷನ್ ಆರಂಭಿಸಿದ್ದು, ಇದಕ್ಕೆ ಚಂದ್ರಯಾನ-4 ಎಂದು ಕರೆಯಲಾಗುತ್ತಿದೆ.
ಚಂದ್ರನನ್ನು ಮತ್ತಷ್ಟು ಅನ್ವೇಷಣೆ ಮಾಡಲು ಚಂದ್ರಯಾನ-4 ಸಹಾಯಕವಾಗಲಿದೆ. ಇದಕ್ಕಾಗಿ ಜಪಾನ್ ಜೊತೆ ಭಾರತ ಕೈ ಜೋಡಿಸಲಿದೆ.