December 22, 2024

ಮೈಸೂರು ದಸರಾ: ತೂಕದಲ್ಲಿ 8 ಬಾರಿ ಅಂಬಾರಿ ಹೊತ್ತಿರುವ ಅರ್ಜುನ ನಂ.1

ನಾಡಹಬ್ಬ ದಸರಾದಲ್ಲಿ 8 ಬಾರಿ ಅಂಬಾರಿ ಹೊತ್ತಿರುವ ಮಾಜಿ ನಾಯಕ ಅರ್ಜುನ ಈ ಬಾರಿಯ ಗಜಪಡೆಯಲ್ಲೇ ಅತ್ಯಂತ ತೂಕದ ಆನೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಈ ಬಾರಿ ದಸರಾದಲ್ಲಿ ಪಾಲ್ಗೊಳ್ಳಲು ಆಗಮಿಸಿದ ಎರಡನೇ ಗಜಪಡೆಯ ತೂಕ ಪರೀಕ್ಷೆ ಮಾಡಲಾಗಿದ್ದು, 5685 ಕೆಜಿ ತೂಕ ಹೊಂದಿರುವ ಅರ್ಜುನ ಎಲ್ಲಾ ಆನೆಗಳಿಗಿಂತ ಹೆಚ್ಚು ತೂಕ ಹೊಂದಿರುವ ಆನೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಒಟ್ಟು 14 ಆನೆಗಳ ತೂಕ ಪರೀಕ್ಷೆ ಮಾಡಲಾಗಿದ್ದು, ಈ ಬಾರಿ ದಸರಾದಲ್ಲಿ ಅಂಬಾರಿ ಹೊರಲಿರುವ ಅಭಿಮನ್ಯು 5160ರಿಂದ 5300 ಕೆಜಿ ತೂಕ ಹೊಂದುವ ಮೂಲಕ ಎರಡನೇ ಸ್ಥಾನದಲ್ಲಿದೆ.
ಆನೆಗಳ ಶಿಬಿರದಿಂದ ಸಾಂಸ್ಕೃತಿಕ ನಗರಿಗೆ ಆಗಮಿಸಿದ ಮೂರು ವಾರಗಳಲ್ಲಿ ಅಭಿಮನ್ಯು 1400 ಕೆಜಿ ತೂಕ ಹೆಚ್ಚಿಸಿಕೊಂಡು ಅಂಬಾರಿ ಹೊರಲು ಸಂಪೂರ್ಣ ಸಜ್ಜಾಗಿದೆ.
ಭೀಮ 4370ರಿಂದ 4685 ಕೆಜಿ ತೂಕ ಹೊಂದಿದ್ದರೆ, ಮಹೇಂದ್ರ 4530ರಿಂದ 4665 ಕೆಜಿ, ಧನಂಜಯ 4980ರಿಂದ 4990 ಕೆಜಿ, ಗೋಪಿ 5080ರಿಂದ 5145 ಕೆಜಿ, ಕಂಜಾನ್‌ 4240ರಿಂದ 4395 ಕೆಜಿ, ವಿಜಯ 2830ರಿಂದ 2885 ಕೆಜಿ, ವರಲಕ್ಷ್ಮೀ 3020ರಿಂದ 3170 ಕೆಜಿ ತೂಕ ಹೊಂದಿವೆ

Leave a Reply

Your email address will not be published. Required fields are marked *