ಏಷ್ಯನ್ ಗೇಮ್ಸ್: ವಿಶ್ವದಾಖಲೆಯೊಂದಿಗೆ ಚಿನ್ನ ಗೆದ್ದ ಶೂಟರ್ ಸಿಫ್ಟ್ ಕೌರ್ ಸಮ್ರಾ
ಭಾರತದ ಶೂಟರ್ ಸಿಫ್ಟ್ ಕೌರ್ ಸಮ್ರಾ 50 ಮೀ. ರೈಫಲ್ 3 ಪೊಸಿಷನ್ ವಿಭಾಗದಲ್ಲಿ ವಿಶ್ವದಾಖಲೆಯೊಂದಿಗೆ ಚಿನ್ನದ ಪದಕ ಗೆದ್ದ ಸಾಧನೆ ಮಾಡಿದ್ದಾರೆ.
22 ವರ್ಷದ ಸಿಫ್ಟ್ ಕೌರ್ ಸಮ್ರಾ ಬುಧವಾರ ನಡೆದ ವೈಯಕ್ತಿಕ ವಿಭಾಗದ ಫೈನಲ್ ನಲ್ಲಿ 469.6 ಅಂಕದೊಂದಿಗೆ ಚಿನನ್ದ ಪದಕ ಗೆದ್ದರು. ಈ ಮೂಲಕ ಭಾರತ ಏಷ್ಯನ್ ಗೇಮ್ಸ್ 2023ರಲ್ಲಿ 5ನೇ ಪದಕ ಗೆದ್ದಂತಾಯಿತು.
ಸಿಫ್ಟ್ ಕೌರ್ ಇದಕ್ಕೂ ಮುನ್ನ ಇದೇ ವಿಭಾಗದ ತಂಡ ಪ್ರದರ್ಶನದಲ್ಲಿ ಬೆಳ್ಳಿ ಪದಕ ಗೆದ್ದಿದ್ದರು. ಅರ್ಹತಾ ಸುತ್ತಿನಲ್ಲಿ 469.9 ಅಂಕ ಗಳಿಸುವ ಮೂಲಕ ಸಮ್ರಾ ವಿಶ್ವದಾಖಲೆ ಬರೆದಿದ್ದರು. ಆದರೆ ಫೈನಲ್ ನಲ್ಲಿ 469.6 ಅಂಕ ಗಳಿಸಿದರೂ ಚಿನ್ನ ಗೆಲ್ಲುವಲ್ಲಿ ಯಶಸ್ವಿಯಾದರು.
ಚೀನಾದ ಕ್ವಿಯಾಂಗಿ ಜಾಂಗ್ ಬೆಳ್ಳಿ ಪದಕ ಗೆದ್ದರೆ ಭಾರತದ ಮತ್ತೊಬ್ಬ ಸ್ಪರ್ಧಿ ಆಶಿ ಚೌಕ್ಸಿ 451.9 ಅಂಕದೊಂದಿಗೆ ಕಂಚಿನ ಪದಕಕ್ಕೆ ತೃಪ್ತರಾದರು.