ವಿಶ್ವದಾಖಲೆಯೊಂದಿಗೆ ಭಾರತಕ್ಕೆ ಮೊದಲ ಚಿನ್ನ ತಂದ ಶೂಟರ್ಸ್!
ಭಾರತ ಪುರುಷ ಶೂಟರ್ ಗಳು 10 ಮೀ. ಏರ್ ರೈಫಲ್ ವಿಭಾಗದಲ್ಲಿ ವಿಶ್ವದಾಖಲೆ ಬರೆಯುವ ಮೂಲಕ ಏಷ್ಯನ್ ಗೇಮ್ಸ್ 2023ರಲ್ಲಿ ದೇಶಕ್ಕೆ ಮೊದಲ ಚಿನ್ನದ ಪದಕ ತಂದುಕೊಟ್ಟಿದ್ದಾರೆ.
ರುದ್ರಾಕ್ಷ್ ಬಾಳಸಾಹೇಬ್ ಪಾಟೀಲ್, ದಿವ್ಯಾಂಶ್ ಸಿಂಗ್ ಪಾನ್ವರ್ ಮತ್ತು ಐಶ್ವರೈ ಪ್ರತಾಪ್ ಸಿಂಗ್ ಥೋಮರ್ ಅವರನ್ನೊಳಗೊಂಡ ಭಾರತ ತಂಡ ಚಿನ್ನದ ಪದಕ ಗೆದ್ದ ಸಾಧನೆ ಮಾಡಿತು.
ಭಾರತದ ತ್ರಿವಳಿ ಶೂಟರ್ ಗಳು ವೈಯಕ್ತಿಕ ವಿಭಾಗದಲ್ಲಿ ಒಟ್ಟಾರೆ 1893.7 ಅಂಕ ಸಂಪಾದಿಸಿ ಇತ್ತೀಚೆಗೆ ಬಾಕುನಲ್ಲಿ ನಡೆದ ವಿಶ್ವ ಚಾಂಪಿಯನ್ ಶಿಪ್ ನಲ್ಲಿ 1890.2 ಅಂಕವನ್ನು ಮೀರಿ ಹೊಸ ವಿಶ್ವದಾಖಲೆ ಬರೆದರು.
ಪ್ರತಿಸ್ಪರ್ದಿ ಚೀನಾ ಶೂಟರ್ ಗಳು 1888.2 ಅಂಕ ಗಳಿಸಿ ಬೆಳ್ಳಿ ಪದಕಕ್ಕೆ ತೃಪ್ತಿಪಡಬೇಕಾಯಿತು. ರುದ್ರಾಕ್ಷ್ ಅರ್ಹತಾ ಸುತ್ತಿನಲ್ಲಿ 631.6 ಅಂಕ ಗಳಿಸಿದರೆ, ಐಶ್ವರೈ 631.6 ಹಾಗೂ ದಿವ್ಯಾಂಶ್ 629.6 ಅಂಕ ಗಳಿಸಿ ವಿಶ್ವದಾಖಲೆಗೆ ಪಾತ್ರರಾದರು.
ಫೈನಲ್ ನಲ್ಲಿ ಇಬ್ಬರಿಗೆ ಮಾತ್ರ ಸ್ಪರ್ಧಿಸಲು ಅವಕಾಶ ಇದ್ದಿದ್ದರಿಂದ ಕಡಿಕೆ ಅಂಕ ಗಳಿಸಿದ್ದ ದಿವ್ಯಾಂಶು ಹೊರಬಿದ್ದರು. ಫೈನಲ್ ನಲ್ಲಿ ರುದ್ರಾಕ್ಷ್ 104.8 ಅಂಕ ಗಳಿಸಿದರೆ, ಐಶ್ವರೈ 104.1 ಅಂಕ ಸಂಪಾದಿಸಿ ಚಿನ್ನದ ಪದಕ ಖಚಿತಪಡಿಸಿದರು.