December 23, 2024

ಈ ಮುಲ್ಲಾ ಭಯೋತ್ಪಾದಕ” ಎಂದು ಸಂಸದನನ್ನುಅಧಿವೇಶನದಲ್ಲೇ ಅವಮಾನಿಸಿದ ಬಿಜೆಪಿ ಎಂಪಿ

1 min read

ದೆಹಲಿ: ಸಂಸತ್‌ನ ​​ ವಿಶೇಷ ಅಧಿವೇಶನದಲ್ಲಿ ಬಿಜೆಪಿಯ ಸಂಸದರೊಬ್ಬರು ಮಾತಿನ ಭರದಲ್ಲಿ ಕೋಮುವೊಂದನ್ನು ಗುರಿಯಾಗಿಸಿಕೊಂಡು ಅವಹೇಳನವಾಗಿ ಮಾತನಾಡಿ
ವಿವಾದಕ್ಕೆ ಗುರಿಯಾಗಿದ್ದಾರೆ.

ಆಡಳಿತ ಪಕ್ಷದ ಸಂಸದರೊಬ್ಬರು ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ಸಂಸದ ಮುಸ್ಲಿಂ ಸಮುದಾಯದ ಕುನ್ವರ್ ಡ್ಯಾನಿಶ್ ಅಲಿ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದು, ಅಲಿ ಅವರನ್ನು ಈ ಮುಲ್ಲಾ ಒಬ್ಬ ಭಯೋತ್ಪಾದಕ ಎಂದು ಕರೆದಿದ್ದಾರೆ.

ಚಂದ್ರಯಾನ-3 ಯಶಸ್ಸಿನ ಬಗ್ಗೆ ನಡೆಯುತ್ತಿದ್ದ ಚರ್ಚೆಯ ಸಂದರ್ಭದಲ್ಲಿ ಬಿಜೆಪಿ ಸಂಸದ ರಮೇಶ್ ಬಿದುರಿ ಅವರು ಡ್ಯಾನಿಶ್ ಅಲಿಯನ್ನು ಭಯೋತ್ಪಾದಕ ಎಂದು ಕರೆದಿದ್ದಾರೆ. ಬಿಜೆಪಿ ಸಂಸದರ ಈ ಹೇಳಿಕೆಯು Xನಲ್ಲಿ ವೈರಲ್​​ ಆಗಿದೆ.
ರಮೇಶ್ ಬಿದುರಿ ಮಾತಿಗೆ ಅವರ ಹಿಂದೆ ಕುಳಿತುಕೊಂಡಿದ್ದ ಅವರದೇ ಪಕ್ಷದ ಸಂಸದರಿಬ್ಬರು ಮತ್ತು ಮಾಜಿ ಸಚಿವರಾದ ರವಿಶಂಕರ್ ಪ್ರಸಾದ್, ಹರ್ಷವರ್ಧನ್ ನಗುತ್ತಿರುವುದು ಕೂಡ ವೀಡಿಯೊದಲ್ಲಿ ದಾಖಲಾಗಿದೆ. “ಈ ‘ಮುಲ್ಲಾ’ ನನ್ನು ಹೊರಗೆ ಎಸೆಯಿರಿ, “ಈ ಮುಲ್ಲಾ ಒಬ್ಬ ಭಯೋತ್ಪಾದಕ” ಎಂದು ಸಂಸದರು ಹೇಳಿದ್ದಾರೆ.

ಸಂಸದರ ಹೇಳಿಕೆ ಬಗ್ಗೆ ಪರಿಶೀಲನೆ ನಡೆಸಿದ ಸ್ಪೀಕರ್​ ಓಂ ಬಿರ್ಲಾ ಅವರು, ರಮೇಶ್ ಬಿದುರಿ ಮಾಡಿದ ಆಕ್ಷೇಪಾರ್ಹ ಹೇಳಿಕೆಗಳನ್ನು ಗಮನಿಸಿ, ಮುಂದೆ ಇಂತಹ ಘಟನೆಗಳು ನಡೆಯಬಾರದು ಎಂಬ ಎಚ್ಚರಿಕೆ ನೀಡಿದ್ದಾರೆ. ರಕ್ಷಣಾ ಸಚಿವ ರಾಜನಾಥ್​​ ಸಿಂಗ್ ಈ ಬಗ್ಗೆ ಪ್ರಕ್ರಿಯೆ ನೀಡಿದ್ದು, ರಮೇಶ್ ಬಿಧುರಿ ಅವರ ಹೇಳಿಕೆ ಖಂಡನೀಯ ಎಂದು ಹೇಳಿದ್ದಾರೆ. ಸಂಸದ ಬಿಧುರಿ ಅವರನ್ನು ಸದನದಿಂದ ಅಮಾನತುಗೊಳಿಸುವಂತೆ ಕಾಂಗ್ರೆಸ್‌ ಆಗ್ರಹಿಸಿದೆ.

Leave a Reply

Your email address will not be published. Required fields are marked *