ಕೆನಡಾ ರಾಜತಾಂತ್ರಿಕ ಅಧಿಕಾರಿ ಉಚ್ಛಾಟನೆ…
ಕೆನಡಾ ರಾಜತಾಂತ್ರಿಕ ಅಧಿಕಾರಿ ಉಚ್ಛಾಟನೆ; 5 ದಿನದಲ್ಲಿ ಹಿಂತಿರುಗುವಂತೆ ಭಾರತ ಸೂಚನೆ
ಖಾಲಿಸ್ತಾನ ಹೋರಾಟಗಾರರ ಗುಂಡಿಕ್ಕಿ ಹತ್ಯೆ ಕುರಿತು ಕೆನಡಾ ಪ್ರಧಾನಿ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಭಾರತ ಕೆನಡಾದ ರಾಜತಾಂತ್ರಿಕನನ್ನು ಉಚ್ಛಾಟನೆಗೊಳಿಸಿದ್ದು, 5 ದಿನದಲ್ಲಿ ತವರಿಗೆ ಮರಳುವಂತೆ ಸೂಚಿಸಿದೆ.
ಖಾಲಿಸ್ತಾನಿ ಹೋರಾಟಗಾರ ಹರ್ದೀಪ್ ಸಿಂಗ್ ನಿಜ್ಜರ್ ಅವರ ಹತ್ಯೆ ಹಿಂದೆ ಭಾರತದ ಕೈವಾಡವಿದೆ ಎಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಬೆಯು ಗಂಭೀರ ಆರೋಪ ಮಾಡಿದ್ದರು.
ಕೆನಡಾ ಪ್ರಧಾನಿಯ ಆರೋಪವನ್ನು ತಳ್ಳಿಹಾಕಿರುವ ಕೇಂದ್ರ ಸರಕಾರ ಕೆನಡಾದ ರಾಯಭಾರಿಯನ್ನು ಉಚ್ಛಾಟಿಸಿದ್ದು, 5 ದಿನದಲ್ಲಿ ಮರಳುವಂತೆ ಸೂಚಿಸಿದೆ.