8 ಅಕ್ರಮ ಕಾಲ್ ಸೆಂಟರ್ ನಿಂದ ಬಹು ಕೋಟಿ ವಂಚನೆ:
8 ಅಕ್ರಮ ಕಾಲ್ ಸೆಂಟರ್ ಗಳ ಮೂಲಕ ದೇಶ ಹಾಗೂ ವಿದೇಶಗಳಲ್ಲಿ ಸಾವಿರಾರು ಮಂದಿಗೆ ಕೋಟ್ಯಂತರ ರೂಪಾಯಿ ವಂಚಿಸಿದ ಜಾಲವನ್ನು ಭೇದಿಸಿರುವ ಪೊಲೀಸರು 200 ಮಂದಿಯನ್ನು ಬಂಧಿಸಿರುವ ಘಟನೆ ಅಸ್ಸಾಂನಲ್ಲಿ ನಡೆದಿದೆ.
ತಾಂತ್ರಿಕ ನೆರವು ಕೊಡುತ್ತೇವೆ ಎಂಬ ನೆಪದಲ್ಲಿ ಗ್ರಾಹಕರನ್ನು ಸಂಪರ್ಕಿಸುತ್ತಿದ್ದ ಕಾಲ್ ಸೆಂಟರ್ ಗಳ ಮೂಲಕ ವಂಚಿಸಲಾಗುತ್ತಿತ್ತು. ಜಾಲದ ಹಿಂದೆ ಮೂವರು ಮಾಸ್ಟರ್ ಮೈಂಡ್ ಗಳಿದ್ದು, 191 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ.
ಅಸ್ಸಾಂ ಕ್ರೈಂ ಬ್ರಾಂಚ್ ಪೊಲೀಸರು ಹಾಗೂ ಗುವಾಹತಿ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಹಲವು ಕಡೆ ದಾಳಿ ನಡೆಸಿದಾಗ ಅಕ್ರಮವಾಗಿ 8 ಕಾಲ್ ಸೆಂಟರ್ ಗಳು ಕಾರ್ಯಾಚರಣೆ ನಡೆಸುತ್ತಿರುವುದು ಪತ್ತೆಯಾಗಿದೆ.
ಬಿಟ್ ಕಾಯಿನ್ ಮತ್ತು ಹವಾಲಾ ಮೂಲಕ ಅಕ್ರಮ ಹಣವನ್ನು ಬೇರೆಡೆಗೆ ವರ್ಗಾಯಿಸುತ್ತಿದ್ದರು. ಈ ಜಾಲ ಎರಡು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದು, ದೇಶದ ವಿವಿಧೆಡೆಯಿಂದ ನೌಕರರು ಈ ಕಾಲ್ ಸೆಂಟರ್ ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು.