ವಿಶ್ವದ ಅತೀ ಎತ್ತರದ ನಾಯಿ 3 ವರ್ಷಕ್ಕೆ ಸಾವು
ವಿಶ್ವದ ಅತೀ ಎತ್ತರದ ನಾಯಿ ಎಂಬ ದಾಖಲೆಗೆ ಪಾತ್ರವಾಗಿದ್ದ ಅಮೆರಿಕದ ಜಿಯೂಸ್ ಹೆಸರಿನ ನಾಯಿ 3 ವರ್ಷಕ್ಕೆ ಮೃತಪಟ್ಟಿದೆ.
ಮೂಳೆ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಜಿಯೂಸ್ 1046 ಮೀಟರ್ (3 ಅಡಿ, 5.18 ಮೀಟರ್) ಎತ್ತರ ಹೊಂದಿದ್ದು, ವಿಶ್ವದ ಅತೀ ಎತ್ತರದ ಶ್ವಾನ ಎಂಬ ವಿಶ್ವದಾಖಲೆಗೆ ಪಾತ್ರವಾಗಿತ್ತು.
ಟೆಕ್ಸಾಸ್ ನ ಬೆಡ್ ಫೋರ್ಡ್ ನಲ್ಲಿದ್ದ ಜಿಯೂಸ್ 2022ರಲ್ಲಿ ವಿಶ್ವದ ಅತೀ ಉದ್ದನೆಯ ಶ್ವಾನ ಎಂಬ ದಾಖಲೆಗೆ ಪಾತ್ರವಾಗಿತ್ತು. ಶ್ವಾನದ ಮುಂಭಾಗದ ಕಾಲಿನಲ್ಲಿ ಕ್ಯಾನ್ಸರ್ ಕಾಣಿಸಿಕೊಂಡಿತ್ತು.
ಕ್ಯಾನ್ಸರ್ ಕಾಣಿಸಿಕೊಂಡ ನಂತರ ವೈದ್ಯರು ಕಾಲಿನ ಶಸ್ತ್ರಚಿಕಿತ್ಸೆ ಮಾಡಿದ್ದು, ದುರಾದೃಷ್ಟವಶಾತ್ ಚಿಕಿತ್ಸೆ ನಂತರ ಅಂದರೆ ಸೆಪ್ಟೆಂಬರ್ 12ರಂದು ಮೃತಪಟ್ಟಿತು.
ಜಿಯೂಸ್ ಮನೆಗೆ ಬಂದ ನಂತರ ಕುಟುಂಬದಲ್ಲಿ ಖುಷಿ ಹೆಚ್ಚಾಗಿತ್ತು. ಆದರೆ ಇಷ್ಟು ಬೇಗ ಕಳೆದುಕೊಂಡಿರುವುದು ನೋವು ತಂದಿದೆ. ಜಿಯೂಸ್ ನನ್ನು ಉಳಿಸಿಕೊಳ್ಳಲು ವೈದ್ಯರು ಹಾಗೂ ಸಿಬ್ಬಂದಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ ಎಂದು ಜಿಯೂಸ್ ನೋಡಿಕೊಳ್ಳುತ್ತಿದ್ದ ಕುಟುಂಬ ಪ್ರತಿಕ್ರಿಯಿಸಿದೆ.