May 6, 2026

ಭೂಕಂಪಕ್ಕೆ ತತ್ತರಿಸಿದ ಮೊರಾಕ್ಕೊ: 632ಕ್ಕೇರಿದ ಸಾವಿನ ಸಂಖ್ಯೆ


ಮೊರಾಕ್ಕೊದಲ್ಲಿ ಸಂಭವಿಸಿದ ಭೀಕರ ಭೂಕಂಪನದಿಂದ ಮೃತಪಟ್ಟವರ ಸಂಖ್ಯೆ 632ಕ್ಕೇರಿದ್ದು, ಸಾವಿರಾರು ಮಂದಿ ಗಾಯಗೊಂಡಿದ್ದಾರೆ.
ಶನಿವಾರ ಮುಂಜಾನೆ ಸಂಭವಿಸಿದ ಭೂಕಂಪನದ ತೀವ್ರತೆ ರಿಕ್ಟರ್‌ ಮಾಪಕದಲ್ಲಿ 6.2ರಷ್ಟು ತೀವ್ರತೆ ದಾಖಲಾಗಿದ್ದು, 300 ಮಂದಿ ವಿವಿಧ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಭೂಕಂಪನದಿಂದ ಮೊರಾಕ್ಕೊ ಅಕ್ಷರಶಃ ಸ್ಮಶಾನದಂತೆ ಆಗಿದ್ದು, ಬಹುತೇಕ ಕಟ್ಟಡಗಳು, ಮನೆಗಳು ಧರೆಗುರುಳಿದೆ. ನಗರದಿಂದ ಹೊರಗೆ ಹೆಚ್ಚು ಹಾನಿ ಆಗಿದೆ ಎಂದು ಮೊರಾಕ್ಕೊ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
ಒಂದು ಅಂದಾಜಿನ ಪ್ರಕಾರ 632 ಮಂದಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಆದರೆ ನಿಜವಾದ ಸಾವಿನ ಸಂಖ್ಯೆ ಲೆಕ್ಕಕ್ಕೆ ಸಿಕ್ಕಿಲ್ಲ. ಅಲ್ಲದೇ ಆವಶೇಷಗಳಡಿ ಇನ್ನು ಎಷ್ಟು ಜನರು ಸಿಲುಕಿದ್ದಾರೆ ಎಂಬುದು ಊಹಿಸಲೂ ಸಾಧ್ಯವಾಗಿಲ್ಲ.
1960ರಲ್ಲಿ ಸಂಭವಿಸಿದ 5.8ರ ತೀವ್ರತೆಯ ಭೂಕಂಪನದಲ್ಲಿ ಸಾವಿರಾರು ಮಂದಿ ಮೃತಪಟ್ಟಿದ್ದರು. ಉತ್ತರ ಅಮೆರಿಕದಲ್ಲಿ ಭೂಕಂಪನದಿಂದ ಜನರು ಪದೇಪದೆ ತತ್ತರಿಸುತ್ತಲೇ ಇದ್ದಾರೆ.

Leave a Reply

Your email address will not be published. Required fields are marked *