ಮೊರಾಕ್ಕೊದಲ್ಲಿ ಪ್ರಬಲ ಭೂಕಂಪನ: 300 ಮಂದಿ ಬಲಿ

ಮೊರಾಕ್ಕೊದಲ್ಲಿ ಶನಿವಾರ ಮುಂಜಾನೆ ಸಂಭವಿಸಿದ ಭೀಕರ ಭೂಕಂಪನದಲ್ಲಿ 300 ಮಂದಿ ಮೃತಪಟ್ಟಿದ್ದಾರೆ.
ಮೊರಾಕ್ಕೊದಲ್ಲಿ ಸಂಭವಿಸಿದ ಭೂಕಂಪನದ ತೀವ್ರತೆ ರಿಕ್ಟರ್ ಮಾಪಕದಲ್ಲಿ 6.8ರಷ್ಟು ದಾಖಲಾಗಿದೆ. ವಾಷಿಂಗ್ಟನ್ ನಿಂದ 44 ಕಿ.ಮೀ. ದೂರದ ಮರಕ್ಕೇಶ್ ಎಂಬಲ್ಲಿ ಭೂಕಂಪನ ಕೇಂದ್ರ ಬಿಂದುಪತ್ತೆಯಾಗಿದ್ದು, ಭೂಕಂಪನದಿಂದ ಹಲವು ಕಟ್ಟಡಗಳು ಹಾನಿಗೊಳಗಾಗಿವೆ. ಭೂಮಿ ನಡುಗಿದ ತೀವ್ರತೆಗೆ ಜನರು ದಿಕ್ಕಾಪಾಲಾಗಿ ಮನೆಯಿಂದ ಹೊರಗೆ ಓಡಿ ಬಂದು ರಸ್ತೆ, ಮೈದಾನದಲ್ಲಿ ನಿಂತಿದ್ದರು.