ರೈಲ್ವೆ ಇಲಾಖೆಯ ಸಿಇಒ ಆಗಿ ಜಯ ವರ್ಮಾ ಸಿನ್ಹಾ ಅಧಿಕಾರ ಸ್ವೀಕಾರ
ರೈಲ್ವೆ ಇಲಾಖೆಯ ಸಿಇಒ ಆಗಿ ಜಯ ವರ್ಮಾ ಸಿನ್ಹಾ ಅಧಿಕಾರ ಸ್ವೀಕಾರ : ಈ ಹುದ್ದೆಗೇರಿದ ಮೊದಲ ಮಹಿಳೆ!
ರೈಲ್ವೆ ಮಂಡಳಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮತ್ತು ಅಧ್ಯಕ್ಷರನ್ನಾಗಿ ಜಯ ವರ್ಮಾ ಸಿನ್ಹಾ ಅವರನ್ನು ಕೇಂದ್ರ ಸರಕಾರ ನೇಮಿಸಿ ಆದೇಶ ಹೊರಡಿಸಿದೆ.
166 ವರ್ಷಗಳ ರೈಲ್ವೆ ಇತಿಹಾಸದಲ್ಲೇ ಈ ಹುದ್ದೆಗೇರಿದ ಮೊದಲ ಮಹಿಳೆ ಎಂಬ ಗೌರವಕ್ಕೆ ಜಯ ವರ್ಮಾ ಸಿನ್ಹಾ ಪಾತ್ರರಾಗಿದ್ದಾರೆ.
ಸಿಇಒ ಮತ್ತು ಅಧ್ಯಕ್ಷರು ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವ ದೇಶದ ರೈಲ್ವೆಯ ಅತ್ಯುನ್ನತ ಹುದ್ದೆಯಾಗಿದೆ.
ಅನಿಲ್ ಕುಮಾರ್ ಲಹೋಟಿ ಅವರಿಂದ ತೆರವಾದ ಸ್ಥಾನಕ್ಕೆ ಜಯ ವರ್ಮಾ ಸಿನ್ಹಾ ನೇಮಕಗೊಂಡಿದ್ದು, ಶುಕ್ರವಾರ ಅಧಿಕಾರ ಸ್ವೀಕರಿಸಿದರು. ಇದಕ್ಕೂ ಮುನ್ನ ಜಯ ವರ್ಮಾ ಟ್ರಾಫಿಕ್ ಟ್ರಾನ್ಸ್ ಪೋಟೇಷನ್ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.
1988ರಲ್ಲಿ ಭಾರತೀಯ ರೈಲ್ವೆಯಲ್ಲಿ ಟ್ರಾಫಿಕ್ ಸರ್ವಿಸ್ ವಿಭಾಗದಲ್ಲಿ ಸೇರಿದ್ದ ಜಯ ವರ್ಮಾ, 35 ವರ್ಷಗಳ ಸೇವೆ ಸಲ್ಲಿಸಿದ ಗೌರವಕ್ಕೆ ಪಾತ್ರರಾಗಿದ್ದಾರೆ.