ಚೆಸ್ ವಿಶ್ವಕಪ್ ಟೈಬ್ರೇಕರ್ ಫೈನಲ್ ನಲ್ಲಿ ಪ್ರಜ್ಞಾನಂದಗೆ ಆಘಾತ
ಚೆಸ್ ವಿಶ್ವಕಪ್ ಟೈಬ್ರೇಕರ್ ಫೈನಲ್ ನಲ್ಲಿ ಪ್ರಜ್ಞಾನಂದಗೆ ಆಘಾತ, ಕಾರ್ಲ್ ಸನ್ ಚಾಂಪಿಯನ್
ಭಾರತದ ಯುವ ಚೆಸ್ ಪಟು ಆರ್.ಪ್ರಜ್ಞಾನಂದ ವಿಶ್ವಕಪ್ ಫೈನಲ್ ಟೈಬ್ರೇಕರ್ ನಲ್ಲಿ ವಿಶ್ವದ ನಂ.1 ಆಟಗಾರ ಮ್ಯಾಗ್ನಸ್ ಕಾರ್ಲ್ ಸನ್ ವಿರುದ್ಧ ಆಘಾತ ಅನುಭವಿಸಿದ್ದಾರೆ.
ಮೂರು ಸುತ್ತುಗಳ ಹೋರಾಟದ ಮೊದಲೆರಡು ಸುತ್ತುಗಳು ಡ್ರಾದಲ್ಲಿ ಅಂತ್ಯಗೊಂಡಿದ್ದರಿಂದ ಗುರುವಾರ ನಡೆದ ಮೂರನೇ ಹಾಗೂ ಅಂತಿಮ ಸುತ್ತಿನ ಟೈಬ್ರೇಕರ್ ಪಂದ್ಯದಲ್ಲಿ ಪ್ರಜ್ಞಾನಂದ ವೀರೋಚಿತ ಸೋಲುಂಡು ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿ ಹೊಂದಿದರು.
೫ ಬಾರಿ ವಿಶ್ವ ಚಾಂಪಿಯನ್ ಶಿಪ್ ವಿಜೇತ ಹಾಗೂ ಮೊದಲ ವಿಶ್ವಕಪ್ ವಿಜೇತ ಸ್ಪರ್ಧಿ ಕಾರ್ಲ್ ಸನ್ 1,10,000 ಡಾಲರ್ ಬಹುಮಾನ ಮೊತ್ತ ಜೇಬಿಗಿಳಿಸಿದರೆ, ಪ್ರಜ್ಞಾನಂದ 80,000 ಡಾಲರ್ ಬಹುಮಾನ ಮೊತ್ತ ಗಳಿಸಿದರು.