January 12, 2025

ಲೋಕಸಭಾ ಚುನಾವಣೆ – ಚಿಕ್ಕಬಳ್ಳಾಪುರ ಟಿಕೆಟ್‌ಗೆ “ಕೈ” ಮಿಲಾಯಿಸುತ್ತಿರುವ ನಾಯಕರು!

ಚಿಕ್ಕಬಳ್ಳಾಪುರ : ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಕಾಂಗ್ರೆಸ್‌ ನಾಯಕರ ಜಗಳ ಬೀದಿಗೆ ಬಂದು ನಿಂತಿದೆ. ಈಗಾಗಲೇ ಎಂಪಿ ಟಿಕೆಟ್‌ಗಾಗಿ ಟವೆಲ್‌ ಹಾಕಿಕೊಂಡು ಕಾಂಗ್ರೆಸ್‌ ಪಕ್ಷದ ಹೈಕಮ್ಯಾಂಡ್‌ ಅಣತಿಗೆ ಕಾದು ನಿಂತಿರುವ ಮೂರು ನಾಲ್ಕು ನಾಯಕರ ಪಟ್ಟಿಗೆ “ಸಿ.ಎಸ್‌.ದ್ವಾರಕಾನಾಥ್‌” ಹೊಸ ಸೇರ್ಪಡೆಯಾಗಿದ್ದಾರೆ.

ಸಿ.ಎಸ್‌.ದ್ವಾರಕಾನಾಥ್‌ ಪರವಾಗಿ ಅವರ ಹಿಂಬಾಲಕರು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಶುರು ಮಾಡಿಕೊಂಡಿದ್ದಾರೆ. ಈ ಬಾರಿ ಚಿಕ್ಕಬಳ್ಳಾಪುರಕ್ಕೆ ಸಿ.ಎಸ್‌.ದ್ವಾರಕಾನಾಥ್‌ ಎಂಬ ಅಭಿಯಾನವೂ ಸಹ ಪ್ರಾರಂಭವಾಗಿದೆ.

ಮಾಜಿ ಸಿಎಂ ವೀರಪ್ಪ ಮೊಯ್ಲಿ ಇಲ್ಲಿ ಹಲವು ಬಾರಿ ಸ್ಪರ್ಧಿಸಿರುವ ಅನುಭವ ಹೊಂದಿರುವ ಕಾಂಗ್ರೆಸ್‌ ನಾಯಕ. ಚಿಕ್ಕಬಳ್ಳಾಪುರದಲ್ಲಿ ಕಚೇರಿಯನ್ನೂ ತೆರೆಯುವು ಮೂಲಕ ಆಗಲೇ ಕ್ಷೇತ್ರದ ಫೀಲ್ಡಿಂಗ್‌ ಶುರುಹಚ್ಚಿಕೊಂಡಿದ್ದಾರೆ. ಇವರ ಜೊತೆಗೆ, ಎಂಎಲ್‌ಸಿ ಸೀತಾರಾಂ ಪತ್ರಿಕಾಗೋಷ್ಠಿ ನಡೆಸಿ ನನ್ನ ಮಗ ರಕ್ಷಾ ರಾಮಯ್ಯನಿಗೆ ಟಿಕೆಟ್‌ ಕೊಡದಿದ್ದರೆ ಸರಿಯಿರುವುದಿಲ್ಲ ಎಂದು ಘರ್ಜಿಸಿದ್ದಾರೆ. ಇವರ ನಡುವೆ ಹಲವು ಕಾಂಗ್ರೆಸ್‌ನ ತುಂಡರಸರೂ ಸಹ ಈ ಬಾರಿ ನಾನೇ ಚಿಕ್ಕಬಳ್ಳಾಪುರದ ಎಂಪಿ ಎಂದುಕೊಂಡು ತಿರುಗಾಡುತ್ತಿರುವುದೂ ಸತ್ಯ.
ಕಳೆದ ಲೋಕಸಭಾ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಬಹುಜನ ಸಮಾಜ ಪಕ್ಷದಿಂದ ಸ್ಪರ್ಧಿಸಿದ್ದ ದ್ವಾರಕಾನಾಥ್‌ ೨೩ ಸಾವಿರ ಮತಗಳನ್ನೂ ಸಹ ಬಾಚಿಕೊಂಡಿದ್ದರು. ಪ್ರಸ್ತುತು ಕೆಪಿಸಿಸಿಯ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷರಾಗಿರುವ ದ್ವಾರಕಾನಾಥ್‌ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಗಣನೀಯ ಸಂಖ್ಯೆಯಲ್ಲಿರುವ ದಲಿತ ಮತಗಳ ಮೇಲೆ ಕಣ್ಣಿಟ್ಟಿದ್ದಾರೆ.

ಈ ಬಾರಿ ಬಿಜೆಪಿಯಲ್ಲಿ ಅಚ್ಚರಿಯ ಅಭ್ಯರ್ಥಿಯ ಹೆಸರು ಘೋಷಣೆಯಾಗುವ ನಿರೀಕ್ಷೆಯಲ್ಲಿದ್ದು, ಜೆಡಿಎಸ್‌ ಯಾವುದೇ ಪ್ರಬಲ ಪೈಪೋಟಿ ನೀಡಲೂ ಸಹ ಸಾಧ್ಯವಿಲ್ಲದ ಸ್ಥಿತಿಯಲ್ಲಿದೆ.

Leave a Reply

Your email address will not be published. Required fields are marked *