ಆಯುಷ್ಮಾನ್ ಭಾರತ ಯೋಜನೆಗೆ WHO ಮೆಚ್ಚುಗೆ
ಗುಜರಾತ್ : ಭಾರತದ ಆಯುಷ್ಮಾನ್ ಭಾರತ್ ವಿಶ್ವದ ಅತಿದೊಡ್ಡ ಆರೋಗ್ಯ ಭರವಸೆಯ ಯೋಜನೆಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಡಾ. ಟೆಡ್ರೋಸ್ ಅಧಾನೋಮ್ ಘೆಬ್ರೆಯೆಸೆಸ್ ಹೇಳಲಿದ್ದಾರೆ.
ಗುಜರಾತಿನ ಗಾಂಧಿನಗರದಲ್ಲಿ ನಡೆಯುತ್ತಿರುವ ಜಿ – ಟ್ವೆಂಟಿ ಆರೋಗ್ಯ ಶೃಂಗಸಭೆಯ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು,ಯೂನಿವರ್ಸಲ್ ಹೆಲ್ತ್ ಕವರೇಜ್ ಮತ್ತು ಆಯುಷ್ಮಾನ್ ಭಾರತ್ ಯೋಜನೆಯನ್ನು ಅನುಷ್ಠಾನಗೊಳಿಸುವಲ್ಲಿ ಭಾರತದ ಪ್ರಯತ್ನವನ್ನು ಶ್ಲಾಘಿಸುವುದಾಗಿ ತಿಳಿಸಿದರು.
ಜಿ 20 ಶೃಂಗಸಭೆಯನ್ನು ಆಯೋಜಿಸುವಲ್ಲಿ ಭಾರತದ ಉತ್ಸಾಹ ಮತ್ತು ಭಾರತದ ಆತಿಥ್ಯ ಮತ್ತು ದೂರದೃಷ್ಟಿಯ ನಾಯಕತ್ವಕ್ಕಾಗಿ ಧನ್ಯವಾದಗಳನ್ನು ಅರ್ಪಿಸುವುದಾಗಿ ತಿಳಿಸಿದ ಅವರು, ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರಕ್ಕೆ ತಮ್ಮ ಭೇಟಿಯನ್ನು ನೆನಪಿಸಿಕೊಂಡು ಅಲ್ಲಿ ನೀಡುತ್ತಿರುವ ಸೇವೆಗಳನ್ನು ಪ್ರಶಂಸಿಸಿದರು.
ಸ್ಥಳೀಯವಾಗಿ ವೈದ್ಯಕೀಯ ಸಲಹೆಗಳು ಮತ್ತು ಚಿಕಿತ್ಸೆಯನ್ನು ಒದಗಿಸುವ ಟೆಲಿಮೆಡಿಸಿನ್ ಸೇವೆಗಳನ್ನು ನಾನು ಇಲ್ಲಿ ಶ್ಲಾಘಿಸುತ್ತೇನೆ. ಇದು ಆರೋಗ್ಯ ಸೇವೆಯನ್ನು ಒದಗಿಸುವ ಅತ್ಯುತ್ತಮ ಉದಾಹರಣೆಯಾಗಿದೆ. ನಾಳೆ ಪ್ರಾರಂಭಿಸಲಿರುವ ಗ್ಲೋಬಲ್ ಡಿಜಿಟಲ್ ಹೆಲ್ತ್ ಇನಿಶಿಯೇಟಿವ್‌ನಲ್ಲಿ ನಾಯಕತ್ವ ವಹಿಸಿದ್ದಕ್ಕಾಗಿ ನಾನು ಇಂಡಿಯಾ ಜಿ20 ಪ್ರೆಸಿಡೆನ್ಸಿಗೆ ಧನ್ಯವಾದ ತಿಳಿಸುವುದಾಗಿ ಡಾ. ಟೆಡ್ರೋಸ್ ಹೇಳಿದ್ದಾರೆ.