ರಾಜ್ಯದಲ್ಲಿ ಜಲಪ್ರಳಯ? ಕೋಡಿಮಠ ಶ್ರೀ ಹೇಳಿದ್ದೇನು…

ಕರುನಾಡಿಗೆ ವಿಪತ್ತು….?
ಕರ್ನಾಟಕಕ್ಕೆ ಕೆಲವೊಂದು ಆಪತ್ತುಗಳು ಎದುರಾಗಿ ಸಾವು ನೋವು ಸಂಭವಿಸಲಿದೆ. ಈ ಬಾರಿ ರಾಜ್ಯದಲ್ಲಿ ಸಾಕಷ್ಟು ಮಳೆ ಬರಲಿದೆ. ಜಲಪ್ರಳಯ ಆಗುವ ಲಕ್ಷಣ ಇದೆ. ಜಾಗತಿಕ ಮಟ್ಟದಲ್ಲಿ ಮೂರು ಗಂಡಾಂತರಗಳು ನಡೆಯಲಿವೆ. ಒಂದೆರಡು ರಾಷ್ಟಗಳು ಮುಚ್ಚಿ ಹೋಗಲಿವೆ. ಜನರ ಅಕಾಲಿಕ ಮೃತ್ಯು ಆಗುವ ಸೂಚನೆ ಇದೆ. ವಿಜಯದಶಮಿಯಿಂದ ಸಂಕ್ರಾಂತಿವರೆಗೆ ಜಗತ್ತಿನಲ್ಲಿ ದುರ್ಘಟನೆಗಳು ನಡೆಯಲಿವೆ. ಆಳುವವರು ಅರಿತರೆ ಗಂಡಾತರದಿಂದ ಪಾರಾಗಬಹುದು. ಇಲ್ಲವಾದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಕೋಡಿಮಠ ಶ್ರೀ ಹೇಳಿದ್ದಾರೆ.